ಕುಳಿತಿರುವೆನು ಸುಮ್ಮನೆ , ನಗುವಿಗೆ ಕಾರಣ ಬೇಕೆ ಎನಿಸಲಿಲ್ಲ ..
ಆಲೋಚನೆಗಳು ನಿಯಂತ್ರಣಕ್ಕೆ ಬಂದಿತ್ತು ..
AC ರೂಮಿನ ಹವಾ MINDಅನ್ನು ಬ್ಲಾಕ್ ಮಾಡಿತ್ತು.
ದಿನದ ಕೆಲಸ ಹೊಗೆ, ಮುಂದಿನ ದಿನಕ್ಕೆ ಮುನ್ನಡೆ ..
ಗ್ಯಾಪ್ ಅಲ್ಲಿ FaceBook gmail updatesಗಳ ವೀಕ್ಷಣೆ ,
ಮನಸ್ಸು ಹಗುರವಾಗಲು hearphones ಅಲಿ ಸ್ವಲ್ಪ "music…
ಡೆಸ್ಕ್ ಮುಂದೆ ಕುಳಿತು, ಕಾಲುಗಳ ಚಲನೆಯೇ ಇಲ್ಲದಂತಾಗಿತ್ತು , ಆದರೆ ಗಡಿಯಾರದ ಮುಳ್ಳು ಸದಾ ನಡೆಯುತಿತ್ತು..
ಕಾಫಿ ಟೀ ಟೈಮ್ ಗಳಲ್ಲಿ ಬಾಯಿ ತೆರೆದು ಒಂದಿಷ್ಟು ಮಾತಾಡುವ ಹಂಬಲ, ನಂತರ laptop ಮುಂದೆ ದೊಂಬರಾಟ ..
ಸೂರ್ಯ ಮುಳಗಿದರು ಕೆಲಸ ಮುಗಿಯುತಿರಲಿಲ್ಲ , ಗಂಟೆ ೮ ಆದರು silkboard ಮುಂದೆ traffic ಕಮ್ಮಿ ಆಗುತಿರಲಿಲ್ಲ ..
೯ ಗಂಟೆ ಆಸು ಪಾಸಿಗೆ ಮನೆ ಎಂಬ ಸುವರ್ಣ ಸೌಧ street light ಬೆಳಕ್ಕಿಗೆ ಹೊಳೆಯುತಿರುವುದು ಕಾಣಿಸುತಿತ್ತು
freshup ಆಗಿ soft soft ಹೆಜ್ಜೆ ಹಾಕ್ಕುತ , ಕೈಗೆ ಸಿಕ್ಕಿದ ತಟ್ಟೆ ಹಿಡಿದು , ಒಂದು rangeಗೆ ಊಟ ಮಾಡಿ ದಬ್ಬಾಕೊಂಡುಬಿಡೋದೆ..
ಸೊಳ್ಳೆಗು ನಮ್ಮ ಕಾಟ ಬೇಡ , sound ಮಾಡೋ fan ಅಂತು ಬೇಡವೇಬೇಡ
ಕನಸ್ಸು ಬರೋವಾಗಲೇ ಬೆಳಿಗೆ ಆಗಿಬಿಡುತೇ, ಒಳ್ಳೆ climax scene ಅಲ್ಲಿ interval ಬಂದಾಗೆ ಅನಿಸುತ್ತೆ
ಹೀಗೆ ನಮ್ಮ ದಿನಚರಿ ಮುಂದುವರಿಯುತ ಹೋಗುತೆ ,ಒಮೊಮ್ಮೆ ಜೀವನಕ್ಕೆ " second chance" ಸಿಕ್ಕಿದ್ರೆ ಚೆನ್ನಾಗಿರುತಿತ್ತು ಅನಿಸುತ್ತೆ ...