ಗುರುವಾರ, ಫೆಬ್ರವರಿ 13, 2014

ಎಲ್ಲಾ Ok.. ಈ Weekends ಯಾಕೆ ??


ಶುರುವಿನ್ನಲ್ಲೇ ಎಲ್ಲದಕ್ಕೂ ಉತ್ತರ ಸಿಗಬಹುದು, ಸರ್ವೇಜನ ಸುಕ್ಕಿನೋಭವಂತೂ  ಎಂದು ನಾವು ಭಾವಿಸಬಹುದು. ನಗುವಿನ್ನಲ್ಲೂ ಆತಂಕ ಅಡಗಿಕೊಂಡಿರಬಹುದು,ಕೋಪದಲ್ಲೂ ಮನಸ್ಸು ಕರಗಬಹುದು..ಒಟ್ನಲ್ಲಿ weekdaysನಲ್ಲಿ  ಸಿಗದಿರೊದು weekends ನಲ್ಲಿ ಸಿಗಬಹುದು..(ಮನೆ ಬಿಟ್ಟು ಆಚ್ಚೆ ಬರ್ಬೇಕು ಅಷ್ಟೇ..)

ಆ ಒಂದು weekend ನ ಚಿತ್ರಣ ನಿಮ್ಮ ಮುಂದೆ play ಮಾದುತ್ತಿದಿನಿ, ಮಧ್ಯದಲ್ಲಿ ಎಲ್ಲಿ ಬೇಕಾದ್ರೂ pause button ಒತ್ತಬಹುದು. ಸ್ಟಾಪ್ ಮಾತ್ರ ನಾನೇ ಮಾಡ್ತೀನಿ ಆಯ್ತಾ. (ಸದ್ಯಕ್ಕೆ ಕೇಳಿಸ್ಕೊಳ್ಳಿ)

Weekdays ಇನ್ನ showroom ಜ಼ಿಂದಗಿ ಬದಲಿಗೆ ಇಟ್ಟು, ನಮ್ಮ garage ಜ಼ಿಂದಗಿ ಆರಂಬಿಸುತಿದ್ದೀನಿ. ನಿಮ್ಮ ಪ್ರೋತ್ಸಾಹ, ಸಹಕಾರ, attendence and atttentiveness ಬಹಳ ಮುಖ್ಯ.  ನಮ್ಮ ಗ್ಯಾರೇಜ್ ಜ಼ಿಂದಗಿಯಲ್ಲಿ, current ಇರೋದಿಲ್ಲ, ac, cellphone, internet ಮತೀತರ ಸೌಲಬ್ಯವು ಸಿಗೋದಿಲ್ಲ. ಕಷ್ಟ ಅನಿಸುತ್ತಲ್ಲ ಇವೆಲ್ಲ ಇಲ್ಲದೆರೋ ಜ಼ಿಂದಗಿ ನಡೆಸೋಕ್ಕೆ?? Well!  ಇಲ್ಲಿ ನಾನು ನಿಮ್ಮನ ಕರ್ಕೊಂಡ್ ಹೋಗ್ತಿರೋ ಜಾಗ ನೀವು ಎಂದು visit ಮಾಡದಿರೊ ಪ್ರದೇಶ. Leh , ladak ಅಂತೂ ಅಲ್ಲ ಬಿಡಿ, ಗೋತು ಅಲ್ಲೂ ಇವೆಲ್ಲ ಸೌಲಬ್ಯ ಸಿಗೋಲ್ಲ ಅಂತ(ಕಾರಣ n/w ಸಿಗೋಲ್ಲ ಅಷ್ಟೇ). ನಾ ಹೋಗೋ ಜಾಗದಲ್ಲಿ network ಕಂಡಿತ ಸಿಗುತ್ತೆ, ದಾರಿನೂ ಇದೆ, ಕಣ್ಮುಂದೆ ನೇ ಕಾಣಸಿದ್ರು,ನಮಗೆ  ಕಾಣದಂತೆ ಮಂಜ್ಜಿನ ಮುಸುಖಾಕಿಕೊಂಡು ಕುಳಿತಿರುತ್ತೆ. ಎಂದು, ಯಾರಿಗೂ ಬೇಡವೆನಿಸಿದ ಜಾಗವದು, ಸಾಮಾನ್ಯ ಜಂತೆಯ ತವರೂರು, ಆಧುನಿಕತೆಯ ಸಂವತ್ಸರದಲ್ಲಿ  ಅಲ್ಲಿ, ಇಲ್ಲಿ ಉಳಿದುಕೊಂಡಿರುವ ಒಂದು ಕಪ್ಪು ಚುಕ್ಕೆ. ಸರ್ಕಾರದ ತಿಮಿಂಗಿಲ್ಲಗಳ ಬಾಯ್ವರಿಸಿ, ಬೆವರರಸಿ, ಬರವಸೆಯ ಊಟ ಪಡೆದು, ಅವರದೇ ಗುಂಪುಗಳಲ್ಲಿ ವಿಲವಿಲ ಅಂತ ವದ್ಲಾಡು ತಿರುವ ಚಿಕ್ಕ, ಚಿಕ್ಕ ಮೀನುಗಳು ವಾಸಿಸ್ಸುವ ಸ್ಥಳ ಎಂದರೆ ತಪಾಗಲಾರದು.

"Welcome to the SLUM"- ಈ ಹೆಸರು ಕೆಳದಿರೋರು ಯಾರು ಇಲ್ಲ. ಕೇಳಿಸಿಕೊಂಡಿರೋರು, ಕ್ಯಾರೆ ಅನ್ನಲ್ಲ.. ಒಟ್ನಲ್ಲಿ ಈ ಬದುಕ್ಕಿಗೆ ನಮ್ಮ ಜೀಪೀ ರಾಜರತ್ನಂ ಹಾಡಿನ ಮೊದಲೆರಡು ಸಾಲುಗಳು pizza ಜೊತೆ sos ತರ ಒಂದಿಕೊಳ್ಳುತ್ತೆ..ಕೇಳಿ..  
"ಹೇಳ್ಕೊಳೋಕೆ ಒಂದು ಉರೂ, ತಲೆ ಮ್ಯಾಗೆ ಒಂದು ಸೂರು, ಮಾಲ್ಗಕ್ಕೆ ಭೂ ತಾಯಿ ಮಂಚ್ಚ,
ಕೈ ಇಡೀದೋಳು ಪುಟ್ನಂಜಿ, ನಗುನಗುತಾ ಉಪ್ಪ್ಗಂಜಿ, ಕೊಟ್ರಾಯ್ತು ರತ್ನನ್ ಪ್ರಪಂಚ..."

ಈ ರತ್ನನ್ ಪ್ರಪಂಚಕ್ಕೆ ticket ಪಡಿದೆ visit ಕೊಡ್ತಿದೀನಿ, ಹುಷಾರು roadsideನಲ್ಲಿ ಲ್ಯಾಂಡ್‌ಮೈನ್ಸ್(shit) ಹಾಕೀರ್ತಾರೆ, ನೋಡ್ಕೊಂಡು ಹೆಜ್ಜೆ ಇಡಬೇಕು.

Evolve Initiative 2 ಇನ ಉದ್ಘಾಟನಾ ಸಮಾರಂಭ ನಡೆದಿದ್ದೆ ಈ ರತ್ನನ್ ಪ್ರಪಂಚದಲ್ಲಿ(ಸ್ಲಮ್ ನಲ್ಲಿ).
Planning ಜೋರಾಗೇ ಇತ್ತು, sheetನಲ್ಲಿ details ತುಂಬಲಾಗಿತ್ತು. 50 printouts ತೆರಿಯಲಾಗಿತ್ತು, educational survey ನಡೆಸೋಕ್ಕೆ ನಮ್ಮ  6 ಜನರ ಗುಂಪೊಂದು ಸಜ್ಜಾಗಿತ್ತು.  ಯಾವ ಸಂಕೋಚವಿರಲಿಲ್ಲ, ನಗುವಿನ ಚಟಾಕಿಯನ್ನೇ ಹಾರಿಸುತ್ತ, ದಾರಿ ಉದ್ದಕ್ಕೂ ಓಡುತ್ತಾ, ಜೀಗಿಯುತ್ತಾ left, right ನೋಡಿ ರೋಡ್ ಕ್ರಾಸ್ ಮಾಡಿ, ಹಂಗು ಇಂಗು ಪ್ರದೇಶದ ಮುಲ್ಲಾ ದ್ವಾರಕ್ಕೆ ಲಗ್ಗೆ ಇಟ್ಟೆವು.  ಮೊದಲು, ಕಂಡಿದ್ದು ಅರ್ವತ್ತರ ಆಸು ಪಾಸಿನಲ್ಲಿ ಇರುವ ಒಬ್ಬ ಮಹಿಳೆ, ತಲೆ ಮೇಲೆ ಬಿಳಿ ಕೂದಲು ಕೆದರಿತ್ತು, ಮಧ್ಯ ಬಾಗದಲ್ಲಿ ಬೊಬ್ಬೆ ಒಂದು ಹೆದ್ಡಿತ್ತು, ಹಳೇ ಸೀರೆ ತೊಟ್ಟು, ಬರಿ ಕಾಲಲ್ಲಿ ಯೋಚನಾ ಮುಖ ವಾಡವನ್ನು  ಇಟ್ಟುಕೊಂಡು ನಮ್ಮ ಮುಂದೆ ಬಂದಳು. "ನಿಮ್ಮನ್ನ ಕೆಲವು ಪ್ರಶ್ನೆಗಳು ಕೇಳಬಹುದಾ?", ಅಂದ ಕೂಡಲೇ,  ಸ್ವಲ್ಪ ಒತ್ತು pause ನೀಡಿ, ಪುನಹ ನಾನು  ಒತ್ತು ಕೊಟ್ಟು , "ನಿಮ್ಮನ ಕೆಲವು ಪ್ರಶ್ನೆಗಳು ಕೇಳಬಹುದಾ?" ಅಂದಿದಕ್ಕೆ , ಆ ಕೇಳಿ ಅಂದರು. ಆಗ, ನಮ್ಮ introduction ಅಚ್ಚ ಕನ್ನಡದಲ್ಲಿ ಇದ್ದು, ಅರ್ಥವಾಗೋ ರೀತಿ, ವ್ಯಕ್ತಿಯ ಸ್ಥಿತಿ ಗತಿಗಳ ಬಗ್ಗೆ ನೋಡಿ, ಗ್ರಹಿಸಿ, ನಮ್ಮ ಬಾಷೆಯ ಶೈಲಿಯಲ್ಲಿ ಬದಲಾವಣೆ ಮಾಡಿಕೋಳೊ ಸಾಮಾನ್ಯ ಜ್ಞಾನ ಅಳವಡಿಸಿಕೊಂಡೆವು.

ಮನೆ No#, ಮನೆಯ ಸದಸ್ಯರ ವಿಚಾರಣೆ ಹಾಗೂ ಯಜಮಾನ/ಯಜಮಾನ್ತಿಯ ಹೆಸರು..ಎಷ್ಟು ವರ್ಷಗಳಿಂದ ಇಲ್ಲಿ ಟೀಕಾಣೆ ಉಡ್ದಿದಾರ್ಯೆಂದು, ಮಕ್ಕಳ ಸಂಖ್ಯೆ ಹಾಗೂ ಅವರ ಆಸೆ, ಆಕಾಂಶೆಗಳು ,ಇತ್ಯಾದಿ ಯ ವಿವರಣೆಗಳನ್ನು ಸಂಪ್ಕ್ಷಿಪ್ತವಾಗಿ A4 size ಶೀಟ್‌ನಲ್ಲಿ ತುಂಬಲು ಜಾಗ ಬಿಟ್ಟು,  fill up the blanks ನಡೆಸಲು ತಯಾರಾದೆವು.

ಮಾತಾಡುತಲೆ, ಪ್ರಶ್ನೆಗೆ ಉತ್ತರ ಸಿಗುತಲ್ಲೇ, blanck spaces ತುಂಬುತ್ತಲ್ಲೇ, ಗೊತಿಲ್ಲದಾಗೆ ನಾವುಗಳು split ಆದೆವು, Slum ಇನ  ಒಳಗೆ ಹೆಜ್ಜೆ ಇಟ್ಟೆವು.. ಅಕ್ಕ, ಪಕ್ಕದ ಮನೆಯವ್ರು ಆಚೆಗೆ ಬಂದರು, ನಮ್ಮನ ಆಕರ್‌ಸ್ಚ್ಛಿತವಾಗಿ ನೋಡಿದರು.(ತಿರುಗ ಈ ಸೆನ್ಸೆಸ್ ಅವರು ಬಂದ್ರೇನೋ ಅನ್ಸಿರುತೆ) ನೋಡುತಲ್ಲೇ, ಮುಂದೆ ಬಂದು ಪ್ರಶ್ನಿಸಿದರು. ಯಾವ ವಿಳಂಬವಿಲ್ಲದೆ, ಉತ್ತರ ನೀಡಿದೆವು.
ಚಿಕ್ಕ ಚಿಕ್ಕ ಮನೆಗಳು, ಮಳೆಗೆ ಬಿದ್ದಿ ಹೋಗಿದ ಹೆಂಚುಗಳು, ಪಾಚಿ ತುಂಬಿಕೊಂಡಿರುವ ಗಲ್ಲಿಗಳು, ಕಾಲಿಗೆ ಸಿಗುವ ಎರಡು, ಮೂರು ಬೀದಿ ನಾಯೆಗಳೂ, ನಮ್ಮ ದಾರಿ ಅಷ್ಟು ಸುಗುಮವಾಗಿರಲಿಲ್ಲ..ಪರಿಸ್ಥಿತಿ ಆದಮೀರಿತು, ಜನರ ಕುಂದು ಕೊರತೆಗಳನ್ನು ನಾವು ಕೇಳಬೇಕಿತ್ತು.  ಸರ್ಕಾರದ ಬರವಸೆಯ  ಕಟ್ಟಡಗಳು ಅರ್ಧದಲ್ಲೆ ಕೈಬಿಡಲಾಗಿತ್ತು, ಅರ್ಧ ಜನ ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ಇನ್ನೂ ಅಳವಾರು ಉಸ್ಸಪ್ಪ ಎಂದು ಉಸಿರು ಬಿಟ್ಟರು..

" ಒಬ್ಬಳು ಮಹಿಳೆ, ಸಂಸಾರವಿರಲಿಲ್ಲ, ಉಷಾರಿಲ್ಲದ್ದೆ ಕೆಲಸಬಿಟ್ಟು ಬಿಸಿಲಿನ ಹವೆಗೆ ಕುಸಿದು, ಕೆಮ್ಮುತ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿದಳು, ಚಿಗ್ಗುರು ಮಿಸ್ಸೆ ಬಿಟ್ಟಿದಾ  ತಾತ ತನ್ನ ಸಂಸಾರದ ಬೇರನ್ನೇ  ಬಿಚ್ಚಿಟ್ಟ. ಒಳಗೆ ಹೆಜ್ಜೆ ಹಾಕುತ್ತಲೇ, ಸಾಕಷ್ಟು ಜನ ಕಿಟಕಿ ಇಂದಾನೋ, ಬಾಗಿಲಿನ  ಸಂದಿ ಇಂದಾನೋ ನೋಡಿ ನಮ್ಮ surveyಗೆ ಸ್ಪಂದಿಸಿದರು.  ಸುಮ್ಮರು 40 ರಿಂದ 45 ವರ್ಷಗಳಿಂದ ಇಲ್ಲಿ ವಾಸವಾಗಿರೋರ ಗುಂಪು ಇದು. ಯಾವ ನೋವನ್ನು ಮೇಲುಕಾಕದೇ, ಕಷ್ಟದಲ್ಲೆ ಸುಖವನ್ನು ಕಂಡುಕೊಂಡ ರೀತಿ ನೀತಿಗಳಿಗೆ ಯಾವ course ಆದಾರಿತವಾಗಿರಲಿಲ್ಲ, ಅವರು ಸಾಗಿಸಿಕೊಂಡು ಬಂದ ಜೀವನವೇ ಒಂದು ಪಾಟವಾಗಿತ್ತು. ಪುಟಾಣಿ ಮಕ್ಕಳು ಕೊನೆಗೂ ನಮ್ಮ ದೃಷ್ಟಿಕೋನದಲ್ಲಿ ಕಂಡರೂ, ಲವಲವಿಕೆ ಇಂದ , ನಾಚ್ಚುತಾ , ಸಣ್ಣ, ಪುಟ್ಟ ಹೆಜ್ಜೆ ಹಾಕ್ಕುತ್ತಾ ನಮ್ಮ ಜೊತೇನೆ ಸರ್ವೇ ಯ ಒಂದು ಅವಿಬಾಜ್ಯ ಅಂಗವಾಗಿ ಬಿಟ್ಟರು.  "

ಇಲ್ಲಿ ಮಕ್ಕಳ ಪೋಷ್ಕಾರಲ್ಲಿ ನಾವು ಕೇಳಿದ ಉತ್ತರ ಒಂದೇ, " ನಾವಂತೂ ಓದಲಿಲ್ಲ ಮಕ್ಕಳನಾದರೂ ಓದಿಸುವುದಕ್ಕೆ  ನಾವು ಸಿದ್ದ". ಅಂದು. ಕುಷಿಯಾಯಿತು Govt ಶಾಲೆಗಳು ಕಡಿಮೆ ಇರುವದರಿಂದ, ಅದರ ಬಗ್ಗೆ ಅಷ್ಟು ಜ್ಞಾನ ವಿಲದಿರುವದರಿಂದ, ಈ slum ಇನ್ನ ಮಕ್ಕಳು ಶಾಲೆಗೆ ಹೋಗುತಿಲ್ಲ ಅನ್ಕೊಂಡಿದೀರಾ, ಕಂಡಿತ ಅಲ್ಲ, ಈ ಮಕ್ಕಳು private schoolಗಳಿಗೆ ಹೋಗುತ್ತಾರೆ, ನಮ್ಮ , ನಿಮ್ಮೆಲರಂಗೆ ಪರಭಾಷಾ ಜ್ಞಾನವನ್ನು ಮತ್ತೆ ಸಾಮಾನ್ಯ ಜ್ಞಾನವು ಒಂದಿರುತಾರೆ. Aisha , ತನ್ನ 3 ಹೆಣ್ಣು ಮಕ್ಕಳಿಗೆ ಶಾಲೆಗೆ ಕಳಿಸುತ್ತಿದಾಳೆ, ಅವರು ಓದು ಮುಂದುವರಿಯಲ್ಲಿ ಎನ್ನೋದೇ ಅವಳ ಆಸೆ. ಘಾರೆ ಕೆಲ್ಸ ಮಾಡ್ಕೊಂಡು , ಇಡೀ ಮನೆಯನ್ನೇ ನಡೆಸುಕೊಂಡು ಬರುತ್ತಿರುವ ರಮೇಶ್, ತನ್ನ ಮಕ್ಕಳು ಉದ್ದಾರವಾಗಲಿ ಎಂಬೋದೇ  ಅವನ ಆರೈಕೆ, pshyochology ಓದಿಕೊಂಡು ತನ್ನ ತಾಯೇ ಹಾಗೂ ತಮ್ಮನನ್ನು ಸಾಕುತಿರುವ ಸುಜಾತಾ.. ಇಲ್ಲಿ ಗುಂಡಿ ತೋಡಿದಾಂಗೆಲ್ಲ ನಾಣ್ಯ ಸಿಗುತ್ತಾ ಹೋಗುತೆ..

ಒಂದಂತೂ ನಿಜ, ವಾಸಿಸೋ ಸ್ಥಳ ಎಲ್ಲೆ ಇರಹಬಹುದು, ಯಾವ ಪರಿಸ್ಥಿತಿಯಲ್ಲಿ ಆದ್ರೂ ಇರಬಹುದು, ಇಚ್ಛಾ ಶಕ್ತಿ ಒಂದು ಇದ್ದರೆ, SLUM DOG millanioreಆಗಬಹುದು. (reelನಲ್ಲಿ ಅಷ್ಟೇ ಅಲ್ಲ,realನಲ್ಲೂ ಇದ್ದಾರೆ).
ಕೆಲವೇ ಮನೆಗಳಷ್ಟೆ cover ಮಾಡೋದಿಕ್ಕೆ ಸಾದ್ಯವಾಯೇತು, ನಾವು ತಂದಿದ paperಗಳು ಮುಗೀತಾ ಬಂತು, ಬಿಸಿಲು ವಿಪರೀತಕ್ಕೆ ಹೇರಿತ್ತು, ಮನೆಯ ಒಳಗೆ ಬಂದು ಸ್ವಲ್ಪ coffee ಕೂಡಿರಿ ಅಂತ ಒಬ್ಬಾಕೆ ಕರೆದರು, ಇಲ್ಲ ಮಾತೊಂದು ಸಲ ಬರೋದಿದೆ, ಊಟಾನೇ ಮಾಡೋಣ ಬಿಡಿ ಅಂದೆ. ಆದರೆ ನಿಮ್ಮ ಮಗು ನಾ 10th std ಗಷ್ಟೇ ಸೀಮಿತ ನಂತರ ಮನೆ ಕೆಲ್ಸ, ಘಾರೆ ಕೆಲ್ಸಕೆ ಮಾತ್ರ ಹಾಕ್ಬೇಡಿ, ನಾವು ಇಲ್ಲಿ ಬಂದಿರೋ ಕಾರಣ ಕೇವಲ ಅಂಕಿ, ಅಂಶಗಳನ್ನು ಬರೆದುಕೊಂಡು report ತಯಾರಿ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳೋಕೆ ಅಲ್ಲ, ನಿಮ್ಮ ಮಗುವಿನ ಭವಿಷ್ಯಕ್ಕೆ ಅಲವು ಜನ ಬೆಂಬಲಕ್ಕೆ ಇದ್ದಾರೆ, ಧೈರ್ಯ ಹಾಗೂ ಮಾರ್ಗದರ್ಶನ ನೀಡೋಕೆ ಸಾಕಷ್ಟು ಸಮಾಜ ಸೇವಾ ಸಂಸ್ಥೆಗಳು ರೂಪಗೊಂಡಿವೆ, ಮಕ್ಕಳ ಕನಸ್ಸು ನಾನಸ್ಸಾಗಲು ಸಹಕರಿಸುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ ಪ್ರಯತ್ನಿಸುತಿದೇವೆ, ನೀವು ಅದರಲ್ಲಿ ಮುಖ್ಯ ಭಾಗವನ್ನು ಅಳವಡಿಸಿಕೊಂಡು ಮುನ್ನುಗಬೇಕು ಎಂಬುದೇ ನನ್ನ ಚಿಕ್ಕ ಆಸೆ ಎಂದು ಹೇಳಿ ಹೊರಟೆನು.
ನೀವು ನಮ್ಮ ಜೊತೆ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಿನಿಸಿದರೆ, ಅಥವಾ ಯಾವುದೇ ರೀತಿಯಲ್ಲಿ ಆದರೂ ಸಹಕರಿಸಬೇಕು ಎನ್ನಿಸಿದರೆ, ಕಂಡಿತ ತಿಳಿಸಿ.. ಈ link ನಾ access ಮಾಡಿ - Fb id ಇದ್ಯಲ್ವ??

                                        https://www.facebook.com/evolve.ngo

" KEEP MOVING FORWORD!!!" (ಮತ್ತೊಮ್ಮೆ next weekendನ ಕಥೆ ಇಟ್ಕೊಂಡು ಬರ್ತೀನಿ, ಅಲಿಯವರೆಗೂ , lifeನಲ್ಲಿ ಕುಷಿಯಾಗಿ ಇರಿ, ಬದುಕ್ಕಾಗಿ ತಿನ್ನಿ, ತಿನ್ನಕೋಸ್ಕರ ಬದುಕಬೇಡಿ, ಯಾಕಂದ್ರೆ ತಿನ್ನಕ್ಕೆ ಗತಿ ಇಲ್ಲದಿರೋರು ಸುತ್ತಾ ಮುತ್ತಾ ಇದೆ ಇರ್ತಾರೆ). Happy Weekend!!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ