ಮಂಗಳವಾರ ಮಂಗಳವಾಗಿ ಇರಲಿ, ನಮ್ಮ ಮಗ ಚಿತ್ರಾನ ತಿಂದು ಚೆನ್ನಾಗಿರಲಿ ಎಂದು ದೊಡ್ಡ ಪ್ಲಾಸ್ಟಿಕ್ ಡಬ್ಬಿ ತುಂಬಾ ನಿಂಬೆ ಹಣ್ಣು ರಸ ಬರಿತ, ಕಡ್ಲೆಕಾಯೆ ಹರಡಿದ ಲೆಮನ್ ರೈಸ್ ಪ್ಯಾಕ್ ಮಾಡಿಕೊಟ್ಟರು. ಬೆಳಗಿನ ಒಂದು ರೌಂಡ್ ಮುಗಿಸಿದ ನನಗೆ ಮಧ್ಯಾನದವರೆಗೂ ಹೊಟ್ಟೆ ಕಾಲಿ ಇರಲಿಲ್ಲ. companyಯಲ್ಲಿ, ODC(place where IT people work) ಒಳಗೆ, ಯಾವ ಕ್ಯಾಬಿನ್ ಬದಿಯಲ್ಲೂ ಊಟದ ಡಬ್ಬಿ ಕಾಣಲಿಲ್ಲ, ವಾಸನೆನು ಬರಲಿಲ್ಲ. ನಗುತ್ತಾ ಲಿಲ್ಲಾಜಾಲವಾಗಿ ಓಡಾಡುತಿದ್ದರು ನಮ್ಮ colleague ಗಳು . ಅನಿರೀಕ್ಷಿತ ಬೆಳವಣಿಗೆ ಮನೆ ಮಾಡಿತ್ತು, ಟೀಮ್ ಲಂಚ್ ಅನೌನ್ಸ್ ಆಗಿತ್ತು. ಅದರ ಬಗ್ಗೆ ನನಗೆ E-ಪತ್ರ ತಲುಪಿರಲಿಲ್ಲ, CCಯಲ್ಲಿ ನನ್ನ ನಾಮಕರಣವಾಗಿರಲಿಲ್ಲ. ಸುದ್ದಿ ತಿಳಿಯುತಿದ್ದಂತೆ, ನನ್ನ ಕೈ ಮನೆಯಿಂದ ತಂದ ಲೆಮನ್ ರೈಸ್ ಡಬ್ಬದ ಹತ್ತಿರ ಹೋಯೆತು. ಅಕ್ಕ-ಪಕ್ಕ ಯಾರು ಇಲ್ಲದಿರೊ ಸಮಯದಲ್ಲಿ ಡಬ್ಬವು ಹೊರಕ್ಕೆ ನಡೆಯಿತು. ಲಿಫ್ಟ್ ಹತ್ತಿತು, ಗ್ರೌಂಡ್ ಫ್ಲೋರ್ ಗೆ ಬಂದು ದಬ್ಬಾಕೊಂಡಿತು. ನನ್ನ ಸ್ನೇಹಿತನ ಕೈ ಸೇರಿತು. ಜೋಪಾನ, ಇದು ನನ್ನ ದಿನ ನಿತ್ಯದ ಹಸಿವು ನೀಗಿಸುವ ವಸ್ತು, ಇದುವರೆಗೂ ಯಾವ ರೊಗಾನು ಕೋಟಿಲ್ಲ, ಸದ್ರುಡವಾದ ಮೈ ಕಟ್ಟು ಕೊಟ್ಟಿದೆ, ಆಯಾಸ್ಸ ನೀಗಿಸಿದೆ, ಆದರೆ ಕೆಲವೊಮ್ಮೆ ನಿದ್ರೇನು ತರುತದೆ, ಪೂರ ಕಾಲಿ ಮಾಡು ಎಂದು ಕುಷಿಯಿಂದ ನನ್ನ ಮುದ್ದಿನ ಲೆಮನ್ ರೈಸ್ ನಾ ಅವನ ಕೈಯಲ್ಲಿ ಇಟ್ಟು ಮೇಲಕ್ಕೆ ನಡೆದೇ. ಟೀಮ್ ಲಂಚ್ ಸಲುವಾಗಿ ಎಲ್ಲರೂ ಹೊರಗೆ ನಡೆದರು. ಗೇಟ್ ಸ್ವೈಪ್ ಮಾಡಿ, left side tar road ಮೇಲೆ ಮಾತಾಡುತಾ ನಡೆದೆವು, ನಡೆದೆವು, ನಡೆಯುತ್ತಲೇ ಇದ್ದೆವು. ಅರ್ಧ ತಾಸಾಯೇತು, ಹೊಟ್ಟೆ ಚಿತ್ರಾನ ನಾ ಬಯಸುತಿತ್ತು, ಆದರೆ ಅದು ಆಗಲೇ ನನ್ನ ಸ್ನೇಹಿತನ ಪಾಲಾಗಿತ್ತು. ಕೊನೆಗೂ ಹೋಟೆಲ್ ತಲುಪಿದ್ವಿ ಗುರು, ಇನ್ನೂ mastkalandar ಅಧ್ಯಾಯ ಶುರು.
ಗ್ರೌಂಡ್ ಫ್ಲೂರ್ನಲ್ಲಿ ಇದ್ದರೂ, ಸಕ್ಕತ್ emptyಯಾಗಿತ್ತು, ಮಲಕೊಂಡೆ ಊಟ ಮಾಡಬಹುದಾಗಿತ್ತು. ಗುಂಪುಗಳಲ್ಲಿ ಟೇಬಲ್ occupy ಮಾಡಿಕೊಂಡೆವು, ಕನ್ಯಾಮಣಿಗಳು ಒಂದು ಕಡೆ ಆದರೂ, IT ಹುಡುಗರು ಇನ್ನೊಂದು ಕಡೆ ಕೂತರು. ಟಿಶ್ಯೂ ಪೇಪರ್ ಮೇಲೆ orderಗಳನ್ನ ಬರೆದುಕೊಟ್ಟೆವು. ಎಲ್ಲರೂ ತಾಲಿ, combo ಆರ್ಡರ್ ಮಾಡಿದರೆ, ನಮ್ಮ ನಾಲ್ವರ ಗುಂಪೊಂದು separate ಆಗಿ ಮನ ಬಂದಂತೆ, 1 basket ರೋಟಿ, ನಾಲಕ್ಕು kulcha, ಎರಡು curry, 4 mango lassi, 1 ಜಂಬೋ ಬಿರಿಯಾನಿ..ಇತ್ಯಾದಿ. Order heavyಯಾಗಿ ಅನಿಸಿದ್ದರೂ, ಮೊದಲು ಒಂದು ಲೊಟ್ಟ ನೀರು ಕುಡಿಯೋ ಕಾತುರ. ನೀರು ಅರ್ಧ ಗಂಟೆ ನಂತರ ಬಂತು, ಅಷ್ಟೊತ್ತಿಗೆ ಬಾಯಲ್ಲಿ salivaನು ಮಾಯವಾಗಿತ್ತು. ಒಳ್ಳೆ salesmanಗಳ ತರ ಮನೆ ಮುಂದೆ ನೀರು ಕೊಡಿ ಕೇಳಿ ಕಾಯುತಾರಲ್ಲ ಆತರ ಆಗಿತ್ತು ನಮ್ಮ ಪರಿಸ್ಥಿತಿ. ಮುಕ್ಕಾಲ್ ಗಂಟೆ ಆಯೆತು, ಒಂದೇಕಡೆ ಕುತಿ ಮೊಣಕಾಲು ನೋವುತಿತ್ತು. ಮ್ಯಾಂಗೊ ಲಸ್ಸಿ steel ಲೊಟ್ಟದಲ್ಲಿ straw ಜೊತೆ table ಮೇಲೆ slide ಆಯೆತು, ನಮ್ಮ ಗಂಟಲಿನೊಳಗೆ ಜಾರಿ ಇಳಿತು. ಸ್ವಲ್ಪ ಹುಳಿ ಇತ್ತು, ಆದ್ರೂ ಏನೋ ಬಾಯಾರಿಕೆ ನೀಗಿಸಿತು. ಈಗ correctಆಗಿ ಒಂದು ಗಂಟೆ ಆಯೆತು. ಆಸಾಮಿ ನಾಪತ್ತೆ. ಯಾವ starter first ಬರುತ್ತೆ, ಎಷ್ಟು piece ಬರುತ್ತೆ, ಈ ಎಲ್ಲಾ ಲೇಖಚಾರಗಳ ನಡುವೆ, waiter ಮೂರು plate ಇಟ್ಟ, ಸಣ್ಣ ಅಪ್ಪಳದ sizeಇನ ಏಳು ನಾನ್ ರೋಟಿಗಳನ್ನ ತಂದಿಟ್ಟ, ಒಂದು bowlನಲ್ಲಿ ಪನೀರ್ ತಡ್ಕಾ ಕೂಡಾ ಕೊಟ್ಟ. order ಮಾಡಿದ curry ಬೇರೇನೆ ಇತ್ತು, ಮುಖ- ಮುಖ ನೋಡ್ಕೊಂಡ್ವಿ, ರೋಟಿ ನೋಡಿದರೆ ಅಂಗೈ ಅಗಲಾನು ಇರಲಿಲ್ಲ, ಬಹುಶ ಬೇಕಿಗೂ ಸಾಲುತಿರಲಿಲ್ಲವೇನೋ. Minute made ತರ minute to eat ಆಗಿಹೋಗೀತು ನಮ್ಮ ಪರಿಸ್ಥಿತಿ. ಏನೇ ಬರಲಿ ಗೂಡುಂ ಸ್ವಾಹಾ . Starter ಇನ್ನೂ ನಾ ಕಾಣೆ, ಬಿರ್ಯಾನಿ ಜಂಬೋ ಅನ್ಕೊಂಡು ತಂದ್ನಪ್ಪ, oval shape plateನಲ್ಲಿ ಬಂತು, ಎಲ್ಲರೂ plateಗೆ ಹಾಕೊಂಡ್ವಿ. ಬಾಯಿಗೆ ಒಂದು spoon ಬಿರಿಯಾನಿ ಹೋಗುತಿದ್ದಂತೆ , ಈ taste ಎಲ್ಲೋ ತಿಂದಂಗೆ ಇದ್ಯಲ್ಲಾ ಅನಿಸಿತು, ವಿನಾಯಕ ಪ್ರಸನ ಹೋಟೆಲ್‌ನಲ್ಲಿ ತಿಂದ ಅನ್ನ ಸಾರು ಜ್ಞಾಪಕಕ್ಕೆ ಬಂತು. ಬಿರಿಯಾನಿ ಕೊಟ್ಟವನಿಗೆ ನನ್ನ ಮೆಹೇರ್ಬಾನಿ. ಒಟ್ಟಿನಲ್ಲಿ ನನ್ನ ಹೊಟ್ಟೆ ಇನ್ನೂ ಬೇಕು, ನೀನೇ ಬೇಕು ಅಂತ ಕೇಳುತಿತ್ತು, ಕೇಳುತೆ ಕೇಳದೇರುತಾ, ನನ್ನ ಮಗ waiter ತಾರಬೇಕಲ್ವಾ. ಇಬ್ಬರು, ಮೂರು ಜನ ಅದೇನು ಮಾಡಿದ್ರೋ, ನಾವೇ ಅಡುಗೆ ಮಾಡಿ ತಿನ್ನಬಹುದಿತ್ತು. next item ಏನೇ ಬರಲಿ ತಿನ್ನೋದೇ ಅನ್ನೊದು decide ಆಗಿತ್ತು, ಆದರೆ item ಬರಬೇಕಲ್ವಾ.. ಕೊನೆಗೂ ರೋಟಿ, ಬಿರ್ಯಾನಿ, i mean ಸಾರನ್ನ ನಂತರ ಸ್ಟಾರ್‌ಟರ್ ಬಂತು. ಯಾವದೂ main course, ಯಾವದೂ starter ಅನ್ನೋ ಬೆದ ಭಾವವಿಲ್ಲದೆ, ಎಲ್ಲಾ ಹೊಟ್ಟೆಗಾಗಿ, ಇಲ್ಲಿ ತಿನ್ನೋಕ್ಕೆ ಬಂದಿರೋ ಕರ್ಮಕ್ಕಾಗಿ ಅಂದು ಮೈದಿದ್ ಆಯೆತು. ಯಾಕೋ ಇನ್ನೂ ಮಿಕ್ಕಿರೊ orderಗಳು ಬರೋ ಯಾವ ಲಕ್ಷಣಗಳು ಕಾಣಲಿಲ್ಲ. ಗ್ಯಾಸ್ ಸ್ಟೋವ್ ಇಲ್ಲದೆ, ಸೌದೆ ಒಲೆಯಲ್ಲಿ ಅಡುಗೆ ಮಾಡುತಾವರೇನೋ ಅನಿಸಿತು. ಇವರಿಗೆ ಯಾಕೆ ಈ ಕೇಡು ಬಂತೋ ಅನ್ಕೊಂಡೆ. kitchen ಒಳಗೆ ಮಾತ್ರ ಕಾಲು ಇಡಲಿಲ್ಲ, ಇಟ್ಟರೆ ರೋಟಿ ತಟ್ಟೋದು ಗ್ಯಾರೆಂಟೀ ಆಗಿತ್ತು. long innings ಆಡೋಣ ಅಂತ ಬಂದಿದ್ದೆ, bowler ಹಾಕಿದ್ದು wide, no ballಗಳನ್ನ ನೋಡಿ bat ಇಟ್ಕೊಂಡು ಸುಸ್ತಾಗಿ, ಕಾದು ಕಾದು ಕೊನೆಗೂ pavilion ಹೋಗಿ ಕೈ ತೋಳ್ಕೊಂಡೇ. ನನ್ನ ಜೊತೆ long standing ಕೊಟ್ಟ ಗೆಳೆಯರ ಬಾಯಿಗೆ dessert ರೂಪದಲ್ಲಿ jaamoon ಬಿತ್ತು, US ಗೆ ಹೋಗುತಿರುವ ಮ್ಯಾನೇಜರ್ ಕೈಗೆ bill ಬಿತ್ತು. ಮೂರು ಗಂಟೆ ಕಾಲ ಏನು ನಡೀತು ಅನ್ನೋದೇ ಗೊತಾಗಲಿಲ್ಲ. ಆಚೆ ಬಿಸಿಲಿಗೆ ಟೋಪಿ ಹಾಕೊಂಡ್ ದಿದ್ರು, ಒಳಗಡೆ ಮಕ್ಕಮಲ್ ಟೋಪಿ ಮಾತ್ರ ಹಾಕಿದಾ. ದಮಾ ಧಮ್ mastkalandar ಅಧ್ಯಾಯ ಮುಗಿಯಿತು. Backup ಆಗಿದ್ದ ನನ್ನ ಲೆಮನ್ ರೈಸ್ ಆಗಲೇ ನನ್ನ ಸ್ನೇಹಿತನ sightನಲ್ಲಿ ಮನೆ ಮಾಡಿತ್ತು. ಕೊನೆಗೂ ಸಿಕ್ಕೀಡು ಕಾಲಿ ಡಬ್ಬಿ, ಕಾಲಿ ಹೊಟ್ಟೆ. ಇದೆ ಗ್ಯಾಪ್ ಲ್ಲಿ ನಮ್ಮ ಹುಡಗರು ಎಷ್ಟು ಟೆಸ್ಟ್ ಕೇಸ್ execute ಮಾಡಿ ಬಿಸಾದೂತಿದ್ದರೋ.. ಅವರಿಗೆ ಕಾದಿತ್ತು evening ಹಬ್ಬ, ಮಳೆಯಲ್ಲಿ, ಒಳಗೆ testcase ಜೊತೆಯಲ್ಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ