ಶುಕ್ರವಾರ, ಮಾರ್ಚ್ 15, 2013

ಆ ನಿನ್ನ ಒಂದು ನೆನಪು

My first step...

ಮುಂಜಾನೆ  ಎದ್ದು  ನಿನ್ನ  ಧ್ಯಾನವ  ಮಾಡುತ್ತಾ  ನಾ  ಕುಳಿತೆ
ಬಾಗಿಲು  ತೆರೆದು  ನಿನ್ನ  ಆಗಮನವನ್ನು  ಕಾಯುತ್ತ  ನಾ  ಸೋತೆ
ರವಿಯ  ಕಿರಣಗಳು  ಅಂಗಳದಲ್ಲಿ  ಬೀರಲು , ಮೈಯನ್ನು  ರೋಮಾಂಚನ  ಗೊಳಿಸಿತು .
ದಿನ  ದಿನ  ಕಳೆದರು , ಮೈ  ಮನ  ಮರೆತರು , ಆ  ಒಂದು  ಚುಂಬನ  ನೆನ್ನಪಾಯಿತು ..
ಚಿಲಿಪಿಲಿ  ಹಕ್ಕಿಗಳ  ಸದ್ದು , ನಿನ್ನ  ಧ್ವನಿಯನ್ನೇ   ಆಲಿಸುತೆ..
ಗಡಿಯಾರದ  ಮುಳ್ಳು  ತಿರುಗುತ , ನಿನ್ನ  ನೋಡುವ  ತವಕ  ಹೆಚಿಸುತ್ತೆ
 ..
ಸ್ನಾನ ಮಾಡಲು  ಹೋದಾಗ ,ನೀರಿನಲ್ಲಿ  ನಿನ್ನ  ಪ್ರತಿಬಿಂಬ  ಬಿಮ್ಬಿಸುತೆ ..
ಕಿಡಕಿಯಲ್ಲಿ ಕಣ್ಣು ಬಿಟ್ಟಿ ನೋಡಿದರೆ , ಆ  ತೆಂಗಿನ  ಗರಿ  ನಿನ್ನ  ರೆಪೆಯನ್ನೇ  ಹೊಲ್ಲುತದೆ ..
ಲೇಖನಿಯ  ಪ್ರತಿ  ಅಕ್ಷರ  ಲೇಖವಿಲ್ಲದಷ್ಟು  ನಿನ್ನನು  ವರ್ಣಿಸುತ್ತೆ..
ನನ್ನ  ಜೀವನದ  ಪುಟದಲ್ಲಿ  ಮೊದಲನೆಯವಳು  ನೀನೆಂದು  ನಾ  ಅನುಸರಿಸಿದೆ .
ನೀನು  ಕಾಣದಿದ್ದರೂ  ನಿನ್ನ  ಪ್ರತಿ  ಉಸಿರು  ನನ್ನ  ಹೃದಯ ಬಡಿತ  ಹೆಚಿಸುತ್ತದೆ ..
ಹಾದಿಯಲ್ಲಿ  ಕಾಣುವ  ಹೆಜ್ಜೆಯ  ಗುರುತುಗಳು  ನಿನ್ನದೇ  ಎಂದು  ನಾ  ಹಿಂಬಾಲಿಸಿದೆ ..
ಹಿಂಬಾಲಿಸುತ್ತಾ  ಒಂದು  ಗುಲಾಬಿ  ತೋಟವನ್ನು  ನಾ  ಕಂಡೆ ..
ಆ  ಗುಲಾಬಿಯ  ಸ್ಪರ್ಶ  ನಿನ್ನ  ತುಟಿಗೆ  ಮುದಿಟಂತೆ ಅನಿಸುತದೆ ..
ವಿಶಾಲವಾದ  ಆಗಸ , ಚಲಿಸುವ  ಮೋಡ , ತಣ್ಣನೆಯ   ಗಾಳಿ ..
ಪ್ರಕೃತಿಯ  ಸೊಬಗು   ಅವಳ  ಹತ್ತಿರ   ಸೆಳೆಯುತದೆ ..
ಸಮುದ್ರದ  ತೀರದಲ್ಲಿ ಕುಳಿತಿರುವಳು ನನಗೋಸ್ಕರ ..
ಮನಸೋತೆ  ನಾನಂದು  ಒಂದು  ಸಲ ..
ನಿನ್ನನು  ಹುಡುಕುತ್ತ   ಹುಡುಕುತ್ತ  ಸೂರ್ಯಾಸ್ತದ  ವೇಳೆಗೆ  ನಾ  ಬಂದೆ .
ಆದರೆ  ಕತಲಿನಲ್ಲಿ ನೀ  ಕಣ್ಮರೆಯಾದೆ.
ಎಂತಹ  ವಿಸ್ಮಯ,  ಆ  ತಾರೆಗಳ  ಜೊತೆಗೂಡಿ ನೀ  ಮಿನುಗಿದೆ ..
ಮುಂಬರುವ  ಹಗಲಿರುಳುಗಳಲ್ಲಿ , ನನ್ನಗುಳಿಯುವುದೊಂದೇ ಒಂದು  "ಆ  ನಿನ್ನ  ಒಂದು  ನೆನಪು ".

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ